ಸುಳ್ಳು ಹೇಳು ಗಿಳಿಯೇ
ಒಂದು ಸುಳ್ಳು ಹೇಳು
ಸತ್ಯವನೆ ನಾಚಿಸುವ
ನಂಬುವಂತ ಸುಳ್ಳು
ವಾಸ್ತವವ ದಾಟಿಸುವ
ಸತ್ಯದಂತ ಸುಳ್ಳು
ಸುಳ್ಳು ಹೇಳು ಗಿಳಿಯೇ
ಒಂದು ಸಣ್ಣ ಸುಳ್ಳು
ಸತ್ತ ಮನವನು
ಬದಿಕಿಸಲು ಸುಳ್ಳು
ವಾಸ್ತವದ ಕಟುವನ್ನು
ಮರೆಯಿಸುವ ಸುಳ್ಳು
ಕ್ಷಣವಾದರೂ ಮರೆಸು
ಜಗದ ಘೋರ ಧಳಿಯನು
ಕರೆದೊಯ್ಯೆ ನೀ ನೀನ್ನ
ಸುಳ್ಳಿನರಮನೆಗೆ
ಹೇಳು ಗಿಳಿಯೇ ಸುಳ್ಳು
ನನಗಾಗಿ ಒಂದು ಚಿಕ್ಕ ಸುಳ್ಳು
ಸತ್ಯ ಹುಡುಕುವಂದು
ಸೋತೆನು ತಿಳಿದಾಗ
ಅದು ಮರೀಚಿಕೆ ಎಂದು
ಹೇಳು ಗಿಳಿಯೇ ಸುಳ್ಳು
ಮರೀಚಿಕೆಯಂತೆ ಹೊಳೆವ ಸುಳ್ಳು
ಹೇಳು ಮುದ್ದು ಗಿಳಿಯೇ ಸುಳ್ಳು
ದೂರ ಸೆಳೆದೊಯಿವ ಸುಳ್ಳು
ನಂಬುವೆನು ನಾನದನು
ಮುಗ್ಧ ಮಗುವಿನಂತೆ
ಜಗವು ಕಟ್ಟಿದ ಸತ್ಯದಂತ-
-ಸುಳ್ಳ ನಂಬಿ ಬದುಕಿದಂತೆ.
- ಸುಬ್ಬು
Its really touching lines Subbu...
ReplyDelete