Tuesday 27 September 2011

ಓರೆ ನೋಟ ...


ಚಲುವೆ ನಿನ್ನೂರೆನೂಟ ನೋಟ 
ಹೇಳುವುದು ಒಂದು ಮಾತ
ಕಣ್ ಮುಚ್ಚಿದಾಗೆಲ್ಲ ತೆರೆಯುವವು  
ಕನಸಿನಲಿ, ನಿನ್ನ ರೆಪ್ಪೆಗಳು, 
ಹುಡುಕುವಲಿ ಅದಕರ್ಥ
ಸಾಗಿ ಕಳೆಯುವುದು ಇರುಳು 

ನುಡಿದಾದರು ತಿಳಿಸು ಮನದ ಮಾತನ್ನು 
ಬರೆದದರು ಕಳಿಸು ಪ್ರೇಮದಲಿ 
ಹೃದಯ ಕಟ್ಟುವ ಕವಿತೆಯನು 
ಹೊಡೆದಾದರು ತಿಳಿಸು ನಿನ್ನ ಮುನಿಸನ್ನು 
ಮೂಡಲಿ ನನ್ನ ಕೆನ್ನೆಯ ಮೇಲೆ 
ನಿನ್ನ ನಾಲ್ಕು ಬೇರೆಳದರು ಇನ್ನು 

ಕೊಲ್ಲದಿರು ಓರೆಯ ಶರನೂಟದಲಿ ನನ್ನ 
ನೋಡಿಯೂ ನೋಡದೆ, ಹೇಳಿಯೂ ಹೇಳದೆ 
ನಿನ್ನ ಕಣ್ಣ ಸನ್ನೆಯ ಸುಳಿಗೆ ಸಿಲುಕಿ ಸೆಣೆಸುತಿದೆ
-ಮನಸು, ಬುಧಿಗ್ಯಾವ ಸುಳಿವು ಕೊಡದೆ 
ಕಣ್ಣಿನ ಕಡಲಾಳದಿ ಇಳಿದಿದೆ, ಹುಡುಕಿದೆ 
ನೀ ಬಾಳಲಿ ಸುಳಿದುದಕೆ ಅರ್ಥವನ್ನ 

ನೀ ಸುಳಿವೇ ಮಿಂಚಿನಲಿ, ಮೌನದಲಿ 
ಸೊಬಗಿನ, ವೇಗದಲಿ ಕೊಡುವೆ-
ನೂರರ್ಥ ಕೊಡುವ ಸುಳಿವನ್ನ 
ಶೋಧಿಸಿದೆ, ಭೇದಿಸಿದೆ, ಚಿಂತಿಸಿದೆನಾಗಲಿ 
ಕೊಡುವುದಾನೂಟ ನೂರು ಅರ್ಥವನ್ನ 
ಕಲಿಯ ಸೂತಿಹೇನು ಕಣ್ಣ ಭಾಷೆಯನ್ನ 

- ಸುಬ್ಬು 

Monday 26 September 2011

ಭಾವ ಭಾಷ್ಪದ ಹಿಂದಿನ ಭಾವ,

 


ಭಾರ್ಗವಿಯ ಅಂತರಾಳದಿ ಉಕ್ಕುವ  ಭಾವ,
ಝಾರಿಯಾಗಿ ಹರಿಯುತಿದೆಯಂತೆ.

ಸಾಗರನ ಹೃದಯದಿ ಉಕ್ಕುವ ಭಾವ,
ಅಲೆಯಾಗಿ ಅಪ್ಪಳಿಸುತಿದೆಯಂತೆ 

ಭಾಸ್ಕರನ್ ಎದೆಯಲ್ಲಿ ಉಕ್ಕುವ ಭಾವ,
ಪ್ರಭೆಯಾಗಿ ಅನುಗ್ರಹಿಸುತಿದೆಯಂತೆ.


    ಭಾವನೆಗಳು ಕೆರಳಿದಾಗ  ಕುಂಚವು ಎರಚುವ ಬಣ್ಣವೇ ಚಿತ್ರವಾಗುವುದು, ಮಾತುಗಳು ಹಡಾಗುವವು, ಗೀಚಿದ ಸಾಲುಗಳೇ ಕಾವಿತೆಗಳಗುವವು . ಭಾವನೆಗಳು ಭಂದನವನ್ನು ಇಷ್ಟಪಡುವುದಿಲ್ಲ ಯಾವುದೊ ರೂಪದಲ್ಲಿ ಹೊರಜಿಗಿದು ಚಿಮ್ಮುತ್ತವೆ. ನನ್ನ ಪುಟ್ಟ ಹೃದಯದಿಂದ ಆಗೀಗ ಚಿಮ್ಮಿದ ಭಾವವೇ ಇಲ್ಲಿ ಕಾವ್ಯರೂಪ ಪಡೆದಿವೆ. ಹೀಗೆ ಚಿಮ್ಮಿದ ಸಾಲುಗಳನ್ನೇ ಸೇರಿಸಿ, ಪೋಣಿಸಿ ಸಹೃದಯರಿಗೆ ಸಮರ್ಪಿಸುವ ಪ್ರಯತ್ನವನ್ನಷ್ಟೇ ನಾನಿಲ್ಲಿ  ಮಾಡುತ್ತಿರುವೆ.


ಸೌಂದರ್ಯ ಕಂಡಾಗ ಹೃದಯದಲಿ ಅರಳಿದ ರಸಿಕತೆಯ ಭಾವ,  ಪ್ರೆಮವನರಸಿದ ಪ್ರೇಮಿಯ ಭಾವ, ಅದು ಸಿಗದೇ ಇದ್ದಾಗ ಕೆರಳಿದ ಭಗ್ನ-ಪ್ರೇಮದ ಭಾವ,  ಅರಿಯದ ಯಾವುದನ್ನೂ ಹುಡುಕಿ ಹೋರಟ ಮನಸಿನ ಶೋಧನೆಯ ಭಾವ, ಸಮಾಜದಲ್ಲಿ  ತಪ್ಪುಗಳು ಕಂಡಾಗ ಮೂಡುವ ವಿಕಟ ಹಸದ ಭಾವ . . . ಎಲ್ಲವನ್ನು ವ್ಯಕ್ತ  ಪಡಿಸಬಲ್ಲ  ಕವಿತೆಯ ಶಕ್ತಿಯನ್ನು ನೆನೆದರೆ ಕವಿತೆ ಮುಕ್ತಿಯ ಸಾಧನ ಎಂದೆನಿಸುತ್ತದೆ.

ಕಾವ್ಯ ಸಾಗರದ ಆಳ, ವೈಶಾಲ್ಯಗಳನರಿತ ಕವಿಸಾರ್ವಭೌಮ ನಾನಲ್ಲ. ಕವಿತೆಗಳಲ್ಲಿ ನನ್ನ ಭಾವನೆಗಳನ್ನು  ಬಿಚ್ಚಿಡ ಹೊರಟವನಷ್ಟೇ. ನನ್ನೀ ಕವಿತೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಚರ್ಚಿಸಲು ಇಲ್ಲಿ ಮುಕ್ತ ಅವಕಾಶವಿದೆ. ನಿಮ್ಮ ಸಲಹೆಗಳು ನನಗೆ ಸ್ಪೂರ್ತಿ ಯಾಗುವವು.


 ಕನ್ನಡ ಸಾರಸ್ವತ ಲೋಕದಿ ಒಂದು ಬಿಂದುವಿನಂತೆ  ಕಿರಿದಾದ ನನ್ನೀ ಭಾವದ ಭಾಷ್ಪ, ಕಲಾರಸಿಕರ ಮನವನ್ನು ಒಂದಿಷ್ಟು  ತನಿಸುವುದರಲ್ಲಿ ಸಮರ್ಥವಾದರೂ ನನ್ನ ಉದ್ದೇಶ ಸಾರ್ಥಕವಾದಂತೆ. 




Wednesday 21 September 2011

ಓ ಪ್ರೀತಿ

ನಿನ್ನರಿವು ಮಾನಸಕೆ ಹೊಳೆದಾಗಲೆಲ್ಲ 
ನಿನ್ನಿರುವು ಸ್ಮೃತಿಯಲ್ಲಿ ಸುಳಿದಾಗಲೆಲ್ಲ 
ಬಿಗಿದೆದೆಯಿಂ ತಡವರಿಸಿ ಬಾರದಿರದೀ ತುಮುಲ 
ಅಂತರಾಳದಿಂ ಉದ್ಗರಿಸಿ ಏಳದಿರದೀ  ಪ್ರಶ್ನೆ 
ತನುವ ಕೆರಲಿಸದೆ, ಕಣ್ಣಂಚ ತೋಯಿಸದೆ

ನನ್ನೆಲ ಗರ್ವವನು ಮರೆತು ಕೇಳುವೆನು 
ನನ್ನೆಲ್ಲ ಭಾವದೊಳು ಬೆರೆತು ಕೇಳುವೆನು 
ಓ ಪ್ರೀತಿ ನಿನಗದೆಷ್ಟಿದೆ ಶಕ್ತಿ !
ಚದುರಿದೆಲ್ಲ ವಿಶ್ವವನು ನಿನ್ನೆಡೆಗೆ ಸೆಳೆದಿಡಲು 
ಚಿಮ್ಮಿದೆಲ್ಲ ಭಾವಗಳ ಒಂದೆಡೆಗೆ ಬೆಸೆದಿಡಲು 


ಬಂಧನದ ಕವಚವನೋಡೆದು 
ಬಲಿತ ರೆಕ್ಕೆಗಳ ಬಡಿದು 
ಸ್ವಚ್ಚಂದ ಬಾನಿನೆಡೆ ಜಿಗಿದ ಹಕ್ಕಿ ತಾನು 
ಮರಳುವುದೇಕೆ ಮತ್ತೆ ಗೂಡಿಗೆ,     
ಓ ಪ್ರೀತಿ ನಿನ್ನೀ  ಸೆಳೆತ ಭಂದನವಲ್ಲ 
ಸ್ವಾತಂತ್ರದಾತ್ಮಕದೇ ಮುಕ್ತಿ 


ಸೆಳೆಯುತಿಹೆ ನೀನೆನ್ನ, ಕರೆಯುತಿಹೆ ನಿನ್ನತ್ತ 
ಸೆಣೆಸಲಾರೆನು ಇನ್ನು, ಸಾಗುವೇನು ನಿನ್ನತ್ತ 
ಮರೆಯಿಸಿಹೆ ಜೀವದಾಸೆಯನು 
ತೋರುತಿಹೆ ನಿನ್ನೋಳಗೊಂದು ವಿಶ್ವವನು 
ಭವಸಾಗರದಿ ಸುಳಿಯೋ ನೀನು
ಸ್ಪೂರ್ತಿ ಸೆಲೆಯೋ ನೀನು . . .

Tuesday 20 September 2011

ಬಾಳ ಹರಿವು

ಕೇಳಿದ್ದೆ ನಾನಂದು 
ಬದುಕು ನಿಂತ ನೀರಲ್ಲ 
ಹರಿವಿದೆ ಅದರೊಳು 
ಅದು ಹರಿವ ನದಿಯೆಂದು  

ಬಾಳು ಕಲಿಸಿದ ಪಾಠ 
ತಾನು ನೀರವದಿ ಹರಿವ ನದಿಯಲ್ಲ 
ರಭಸವಿದೆ ತನ್ನೊಳು, ತಾನು 
ಧುಮ್ಮಿಕ್ಕಿ ಭೋರ್ಗರೆವ ಜಲಧಾರೆಯೆಂದು

 ಸಾಗುತಿರೆ ವೇಗದಲಿ 
ಮನದ ಮೋಹದ ತೆಪ್ಪ 
ರಭಸ ತಳ್ಳಿದೆಡೆಗೆ
ಆಳ ಸೆಳೆದ ಕಡೆಗೆ 

ಹರಿವಿನೋಳು ಸುಳಿಯೇರಗಿ
ತಿರುಗಿಸಿತು ಮನದ ತೆಪ್ಪವನು 
ಬಯಕೆಯ ದಿಕ್ಕು 
ಬ್ರಮ್ಹಣೆಗಣಿಯಾಯ್ತು 

ಅದೆಷ್ಟು ಪುಟ್ಟದು 
ಚೈತನ್ಯದೀ ಹುಟ್ಟು 
ಸಹಿಸಬಲ್ಲದೆ ಅಲೆಗಳಬ್ಬರವ 
ಸೆಣೆಸ ಬಲ್ಲದೆ ಹರಿವಿನೆದುರು 

ಉಗಮದಿಂ ಸಾಗರಕೆ 
ಸಾಗಿರುವ ಯಾತ್ರೆಯಲಿ 
ಅಂಬಿಗನು ನಾನಲ್ಲ 
ಪಯಣಿಗನು ಮಾತ್ರ.  


ನಾನ್ಯಾರೋ ಅವಳಿಗೆ

ಮಿಂಚಿನಲಿ ಕಂಡವಳು 
ಕಿರುನಗೆಯ ಚಲ್ಲಿದಳು 
ಮನವೆಲ್ಲ ತುಂಬಿಹಳು  
ಅವಳೇ ನನ್ನವಳು 

ರೆಪ್ಪೆಗಳ ಮುಚ್ಚುತಲೆ 
ಒಳ ಬರುವಳು 
ಸಹಜ ನೋಟದಲೆ 
ಹೊಸದಿಕ್ಕು ತೋರುವಳು 

ನನ್ನೆಲ್ಲ ಕನಸಿಗೆ 
ಬಣ್ಣ ಕೊಟ್ಟವಳು 
ಕಲ್ಪನೆಯರಮನೆಯ 
ರಾಣಿ ಅವಳು

ಕಂಡ ಕ್ಷಣದಿಂದ
ಕಾದಿಹೆನು ಕ್ಷಣಕಾಗಿ 
ಮನಬಿಚಿ ಇದನೆಲ್ಲ 
ಹೇಳಿ ಬಿಡಲು  

ನನ್ನವಳು ನನ್ನವಳು 
ಮನವ ಚುಂಬಿಸಿದವಳು 
ವಾಸ್ತವದಿ ಸಿಗದವಳು 
ದೂರ ನಿಂತಿಹಳು 

ಮನದ ಬಾಗಿಲನೋಮ್ಮೆ 
ತಿಳಿಯದೆ ತಟ್ಟಿದಳು 
ಯನ್ನೊಳಗೆ ನಗುತಿಹಳು 
ಹೊರಗೆನ್ನ ಕಾಡುವಳು 

ಜಂಗುಳಿಯ ಜಗವಿದು 
ಕಾಣುವನೆ ನಾನವಳಿಗೆ 
ಅವಳೇ ನನ್ನವಳು 
ನಾನ್ಯಾರೋ ಅವಳಿಗೆ.   

-  ಸುಬ್ಬು