Friday 8 June 2012

ಒ0ದು ನೋಟದ ಪ್ರೇಮ 

ನಿನ್ನ ಕಂಠದ ಸಿರಿಗೆ,
ನಿನ್ನ ಬಣ್ಣದ ಮೆರುಗಿಗೆ,
ಮಾರುಹೋಗಿ ಬಿದ್ದೆ ನಾ 
ನಿನ್ನ ಹಿಂದೆ-
ನಾನೊಬ್ಬ ಆಲೆಮಾರಿ 

ಸೆರೆಯಾದೆ ನೀ ಕಂಡ0ದೇ 
ನನ್ನ ಕಂಗಳಲಿ 
ನೂರು ಗಾವುಗ ದೂರ 
ನೀ ಕಂಡರೂ ಸರಿಯೇ 
ಗುರುತಿಸಬಲ್ಲೆ ನಿನ್ನ ನಾ ನಲ್ಲೆ 

ಒಮ್ಮೆ ಕಂಡವಳು 
ಮತ್ತೆಂದು ಕಾಣುವೆಯೋ 
ಕದ್ದು ನಿನ್ನನೆ ನೋಡುವಾಸೆ 
ಮುಟ್ಟದೆ ಮುದ್ದಾಡುವಾಸೆ 
ಹಾರಿ ಹೋಗದಿರೆ ಚನ್ನೆ 
ನಾ ಹತ್ತಿರಾದೊಡನೆ 

ನೂರು ಬಣ್ನದ ಜಾತಿ 
ನಿಮ್ಮವರಲೂ 
ನಿನ್ನಕ್ಕ ತಂಗಿಯರು 
ನಿನ್ನನ್ನೇ ಹೋಲುವರು 
ಆದರೂ ನೀ ನೀನೆ -
ನಿನಗಿದೋ ನಾನಿಡುವೆ 
ಮುದ್ದು ಹೆಸರು 

ನನ್ನ ಪ್ರೇಮದ ಪರಿಯ 
ಇವರೇನು ಬಲ್ಲರು?
ಹಲವರು ಆಡಿ ನಕ್ಕರು 
ಕೆಲವರು ಹೊಗಳುಭಟರು 
ಮೌನದಲೇ
ನಸುನಕ್ಕು ನಡೆದೆ  -
ನಿನ್ನ ಹುಡುಕುತಲಿ 

ಮೋಹಿ ಪಂಜರಗಳು 
ಹಬ್ಬುತಿರೆ ದರ್ಪದಿ 
ವಿರಳವಾಗಿತಿಹ 
ನಿನ್ನ ಬಳಗದ ಮೇಲೆ 
ಅರಳಿತೇಕೋ ನನ್ನೆದೆ ಪ್ರೇಮ 
ನಾನೊಬ್ಬ ಪಕ್ಷಿ ಪ್ರೇಮಿ 

- ಸುಬ್ಬು 


















Monday 20 February 2012

ದಿಮಾಕು

ಕಟ್ಟಿಕೊಟ್ಟೀಯೇನೋ ಬ್ರಹ್ಮ
ಹಮ್ಮು ಬಿಮ್ಮುಗಳಿಲ್ಲದ ಲೋಕ
ಸಾಧಿಸಲು ಹೊರಟವನು ಏನೇನೋ-
ಸರ್ವರೊಳಗೊಂದಾಗುವುದೇ ಸಾಧನೆ
ಎಂದು ಸಾಧಿಸುವ ಲೋಕ

ಅಸಾಧ್ಯ ಬಿಡು ಅದು ನಿನಗೂ
ಸೃಷ್ಟಿಸಿದವನು ನಾನೆಂದು ಬೀಗಿ -
ಶಿವನಿಂದ ಒದೆ ತಿಂದವನು ನೀನು
ನಾನೆಂದು ಸೊಕ್ಕಿದ ನಾಲ್ಕರೋಳಗೊಂದು -
ರುಂಡ ಕಳೆದುಕೊಂಡವನು ನೀನು

ಕಂಡಿದ್ದೇನೆ ನಾನೂ, ನಿನಗಾಗದ್ದನ್ನು -
ಕಟ್ಟಲು ಹೊರಟವರನ್ನು
ಸೃಷ್ಟಿಗೆ ಸವಾಲು ಹಾಕಿದವರನ್ನು
ಸಮಾನತೆಯ ಆಶಾ ಗೋಪುರ ಕಟ್ಟಿ -
ಕಟ್ಟಕಡೆಗೆ ಕುಸಿದು ಬಿದ್ದವರನ್ನು

ಸಮಾಧಿ ಸೇರಿದರಲ್ಲೋ ..
ಸಮಾನತೆಯ ಪಣತೊಟ್ಟ ಮುಗ್ಧ -
ಅಸಮಾನ್ಯರು ಪಾಪ 
ಅಸಮಾನರಾಗಿಯೇ ಉಳಿದುಹೋದರು
ಆ ದಿಮಾಕಿನವರೆದುರಿಗೆ

ಎದ್ದವರು ಯಾರು.. ತುಳಿದು
ಸಂಪತ್ತುಗಳ ಬಾಚಿಕೊಂಡವರು
ಸರ್ವಾಧಿಕಾರದ ಮತ್ತಿನವರು
ಅಕ್ಷರ ನಿಶೆಯ ತಲೆಗೇರಿಸಿಕೊಂಡವರು
ಘನತೆ, ಗೌರವ, ಕೀರ್ತಿಗಳೆಂದು-
ಗತ್ತಿಗೆ ನೂರರ್ಥ ಕೊಟ್ಟವರು


ಇದಿರುವುದು ಹೀಗೆ ಏನೂ -
ಬ್ರಹ್ಮ ನಿನಗೂ ತಿಳಿಯದೇನೋ..

- ಸುಬ್ಬು 




















Friday 10 February 2012

ಅವನೊಡನೆ ಜಾರಿತು ಹೊತ್ತು ..

( ಹೆಣ್ಣಾಗಿ ಬರೆವಾಸೆ ..)

ಬಂದನಾ ನನ್ನಿನಿಯ,
ಬಂದೊಡನೆ ಕೆನ್ನೆಗೆ-
ಬಾರಿಸಿಬಿಡುವಷ್ಟು ಸಿಟ್ಟು 
ಅವನಿಗೆ ಕಾದ ಕಾಲವಿದು 
ಕಾದ ಕಾವಲಿಯಂತೆ 
ಸುಡುತಿವೆ ಚಿಂತೆಗಳು ಮನವ
ಮೈ ಸುಡುವ ಬಿಸಿಲೊಡನೆ 

ಸೋಲದಿರು ಮನವೇ,
ಈಬಾರಿಯೂ 
ಕರಗದಿರು ಅವನ-
ಪೊಳ್ಳು ನೆಪಗಳ ಕೇಳಿ
ಉಕ್ಕದಿರು ಪ್ರೀತಿ ಇಂದವನ ಮೇಲೆ  
ಸುಡುಕೂಪವಿದು ಕೊಂಚವಾದರೂ -
ಥಳಿಸಿ ತಣಿಯಲಿ ಅವನ

ಬಂದನಿಗೋ ಅವನೇ ..
ಹಾ .. ಅವನೇ ... 
ತಾಳು ತಾಳೆ ಮನವೇ,
ಅಯ್ಯೋ ..!
ತಣ್ಣಗಾದೆಯೇ ಇಂದೂ..
ಅವನ ಕಂಡೊಡನೆ
ಉರಿವ ಕೆಂಡದ ಸೂರ್ಯ 
ಮುಳುಗುವೀ ಹೊತ್ತಿನಲ್ಲಿ 
ಶಾಂತ ಸಾಗರದಿ-
ಮುಳುಗಿಯೇ ಬಿಟ್ಟನೇ..

ಕೆಂಡದಂಥಾ ಕೋಪದ ಹಿಂದೆ
ಬಚ್ಚಿಟ್ಟುಕೊಂಡಿತ್ತೆಲ್ಲಿ  ಅವನಮೇಲಿನ-
ಹುಣ್ಣಿಮೆಯ ತಂಪು ಅನುಕಂಪ
ನಗಿಸಿಬಿಟ್ಟನಲ್ಲಾ ನಲ್ಲ
ಈಬಾರಿಯೂ ಎರೆಡು ಮಾತಿನಲೇ
ಕೊಂದುಬಿಡಲೇ ಈಬಾರಿ-
ಎಂದುಕೊಂಡವಳ

ಕಂಡೊಡನೆ ಅವನ, ಉಕ್ಕಿತೆಕೆ
ನನ್ನೆದೆಯ ಭಾವ ಪ್ರವಾಹ
ಸ್ಥಬ್ದವಾಗಲಿ ಅವನೊಡನಿರುವ -
ಈ ಹೊತ್ತು ಎನುವ ಮೋಹ

ಬಂದವನು ಹರಟಿ ಬರಿ,
ಹೊರಟಾನೇನೋ
ಮುತ್ತೊಂದ ಕೇಳಿ ಕಸೆಯುವ ತುಮುಲ 
ಚುಂಬಿಸಲು ಬರಲವನ ತುಟಿಗಳು
ನಾಚಿದವು ಕೆನ್ನೆ, ಆಶೆಯಲಿ ಮುಂಗುರುಳು 
ಮುಚ್ಚಿದ ಕಣ್ಣುಗಳು ಕಂಡಿಲ್ಲ ಮುಂದಿನದ 
ಅನುಭವ ವಷ್ಟೇ, ಚೈತ್ರ ಚುಂಬನದು
ರೋಮಾಂಚನ ತಂದ ಮಿಂಚು ಹರಿದು 
ಮೈ ರೋಮಗಳು ನಿಮಿರಿ ನಿಂತವೆಂತು 

ಸಾಕು ಸಾಕಿದೆಲ್ಲ, ಸೋಲುತಿಹೆನಲ್ಲ
ಎದೆತಾಳ ಇಂದೇಕೋ ತಪ್ಪುತಿದೆಯಲ್ಲ
ಸಲಿಗೆ ನಾ ಸರಿಸಿದಂತೆಲ್ಲ
ಆಕ್ರಮಣ ಅವನದು ಹೆಚ್ಚುತಿದೆಯಲ್ಲ
ಮೈ ಕೊಡವಿ ಗೆದ್ದೆನೆಂದುನಾ ಎದ್ದು ಬಿಡಲೇ

ಇಲ್ಲ !
ಅವನ ಹಿತದ ಹಿಡಿತದ
ಬಿಗಿಪಟ್ಟು ಬಿಡಿಸಿಕೊಳಲೋಲ್ಲೇ
ಮನ ಸೋತವಳು ನಾ ..
ಗೆದ್ದು ಹೊರಟುಬಿಡಲೊಲ್ಲೆ
ಸೂತುಬಿಡಲೇ...
ಕಳೆದಾವು ಆ ಮಧುರ ಕ್ಷಣಗಳು ಈಗಲೇ
ಇವನಿಗೆ ಇಂದು ನಾ ಸೋತುಬಿಡಲೆ

- ಸುಬ್ಬು 





Monday 6 February 2012

ಅಂದು 
ನಾಗೆದ್ದೆ , ನಾಗೆದ್ದೆ 
ಎಂದು ಕುಣಿದು 
ನಗುತ ಕೇಕೆ ಹಾಕಿದ 
ಕ್ಷಣಗಳ ನೆನೆದು 
ಕಣ್ತುಂಬಿಬಂದಿತು ಇಂದು -
ನಾ ಗೆಲ್ಲಲೆಂದೇ 
ಅವನು ಸೋತಿದ್ದ 
ಎಂದು ತಿಳಿದು 

- ಸುಬ್ಬು 

Sunday 5 February 2012

ನೇರ ನೋಟ v/s  ಓರೆ ನೋಟ... 

ಕಾಡದೆ ಬಂದೆನ್ನ ಕೂಡು ಬಾ 
ಎಂದು ಆಹ್ವಾನ ಕೊಟ್ಟಿತ್ತು 
ನನ್ನ ನೇರ ನೋಟ -
ಕಾಡುವಲ್ಲಿನ ಸುಖ 
ಕೂಡಿ ಬಾಳುವಲ್ಲಿಲ್ಲ 
ಎಂದು ಉತ್ತರ ಕೊಟ್ಟಿತು 
ನಿನ್ನ ಓರೆ ನೋಟ

- ಸುಬ್ಬು 

Saturday 4 February 2012

ಕಲ್ಲಲ್ಲ ನನ್ನೀ ಕಲ್ಲು ಮೂರುತಿ...


ಬೆಟ್ಟದ ತುದಿಯಿಂದ 
ಕಡು ಬಂಡೆಯೊಂದ
ಕಡಿದು ತಂದೆನಂದು 

ಕೆತ್ತಿ ರೂಪವ ಕೊಟ್ಟೆ 
ನಯದ ಲೀಪವನಿತ್ತೆ 
ಕಳೆತಂದೆ ಕುಸುರಿಯಲಿ 
ಆಭರಣ ಮಾಡಿ

ಅರಳಿತಲ್ಲಿ ಸೋಬಗಿನಲಿ
ನನ್ನ ಕಲ್ಪನೆಯ ಬಿಂಬ 
ನಾ ಕಂಡೆ ಅಲ್ಲಿ-
ನನ್ನ ದೇವರನೆ

ಭಕ್ತಿ ಸುಧೆಯೋಳು ಮುಳುಗೆ 
ಕಲ್ಲು ಎಂಬುದ ಮರೆತು 
ನಡೆದಿತ್ತು ಮೌನದಲಿ -
ಪ್ರೀತಿಯ ಆರಾಧನೆ 

ಬಿಚ್ಚಿಕೊಂಡಿತು ಅಲ್ಲಿ 
ಅಂತರಾಳದ ಚಿತ್ರ 
ಪ್ರೆಮಮೂರ್ತಿಯೊಳು ಬೆರೆತು 
ಮೋಹ ಪ್ರೇಮವ ಬೆಸೆದು 
ಕಲ್ಲು ಕಲ್ಲಲ್ಲ 
ಮುರ್ತಿಯಾಯಿತು ಅಂದು 
ಜೀವ ತಂತಿಯ ಮಿಡಿದು 

ಕಲ್ಲು ಕಲ್ಲೆ ಎನುವುದನು
ಒಪ್ಪಲೇ ನಾನಿಂದು 
ಕಲ್ಲೋಳು ಬೆರೆತ -
ನನ್ನೀ ಭಾವ ಕಲ್ಲೇನು 
ದೇಹವಿಲ್ಲದೆ ಜೀವ ಉಳಿವುದೇನು 

- ಸುಬ್ಬು 


Friday 3 February 2012

ನಾನು ನೀನಾದಮೇಲೆ

ನಿನ್ನ ನಗುವಲಿ 
ಕಾಣುತಿಹೆನು ನನ್ನ ನಲಿವ
ನಿನ್ನ ನೋವನು ಮರೆಸುವಲಿ
ಮರೆತಿಹೆನು ನನ್ನೆಲ್ಲ ನೋವ 

ಮರೆತು ಹೋಗಿದೆ 
ಕನ್ನಡಿಯ ನನ್ನ ಬಿಂಬ 
ಕಣ್ ಮುಚ್ಚಿದಾಗೆಲ್ಲ -
ತುಂಬಿ ಕೊಳ್ಳುವೆ ನೀ ಕಣ್ ತುಂಬಾ 

ನನ್ನೊಳಗಿನ 
ನನ್ನ ಮರೆತೆ
ನಿನ್ನೊಳಗೆ -
ನನ್ನ ಕಾಣುವುದ ಕಲಿತೆ 

ನಾನು ನೀನಾದಮೇಲೆ
ಮರೆ ನಿನ್ನ-
ಎಂದರೆ ಅರ್ಥವೇನು 
ಇದುವೇ ನಿಜ ಪ್ರೀತಿ ಅಲ್ಲವೇನು 

ಸುಬ್ಬು

Sunday 29 January 2012

ನನ್ನ .. ಅವಳು

ಮಾಯದ ತೋಟದಿ ಅಂದು 
ನಾ ಕಂಡ ಕೆಂಡ ಸಂಪಿಗೆ
ನನ್ನವಳು, ನನ್ನ ಹುಡುಗಿ

ತಂಗಾಳಿಯಲಿ ಬೇರೆತು  
ಆ ಬೆಡಗಿ ನಲಿವುದ ಕಂಡು 
ಅರಳಿ ನಗುವುದು 
ನನ್ನೆದೆಯ ಮಲ್ಲೆ ಮೊಗ್ಗು 

ಬೀಸುಗಾಳಿಗೆ ಬಾಗಿ-
ಬೀಗಿ ಬಳುಕುವ 
ರೇಷ್ಮೆ ಎಳೆಗಳು 
ನನ್ನವಳ ಮುಂಗುರುಳು 

ನಕ್ಕಾಗ ಹೊಳೆಯುವಳು ,
ಹೊಳೆದೆನ್ನ ಸೆಳೆಯುವಳು 
ಮುತ್ತು ಪೋಣಿಸಿದಂತೆ 
ಅವಳ ದಂತ ಪಂಕ್ತಿ 

ಅವಳ ಹವಳದ ತುಟಿಗೆ 
ಮುತ್ತಿಟ್ಟ ಕ್ಷಣದಿ- 
ಕೆರಳುತಿದೆ ತನುವು  
ಮಿಂಚು ಹರಿದಿದ ಆ - 
ಕ್ಷಣವ ನೆನೆ ನೆನೆದು

ರಸಿಕನ ಮಾಡಿದವೆನ್ನ  
ಚೋರಿಯ ಚಂಚಲ ಕಣ್ಣುಗಳು  
ತಬ್ಬಿಕೋ ಇನಿಯ,
ಎಂದೊಮ್ಮೆ ಕರೆದು 

ತಬ್ಬಿದ ತೊಳುಗಳುಗಳೇ 
ಬಂಧಿಯದವು 
ಅವಳ ಪ್ರೇಮ ಪಾಶದಿ 
ಸಿಲುಕಿದಂದು

- ಸುಬ್ಬು