ಕೇಳಿದ್ದೆ ನಾನಂದು
ಬದುಕು ನಿಂತ ನೀರಲ್ಲ
ಹರಿವಿದೆ ಅದರೊಳು
ಅದು ಹರಿವ ನದಿಯೆಂದು
ಬಾಳು ಕಲಿಸಿದ ಪಾಠ
ತಾನು ನೀರವದಿ ಹರಿವ ನದಿಯಲ್ಲ
ರಭಸವಿದೆ ತನ್ನೊಳು, ತಾನು
ಧುಮ್ಮಿಕ್ಕಿ ಭೋರ್ಗರೆವ ಜಲಧಾರೆಯೆಂದು
ಸಾಗುತಿರೆ ವೇಗದಲಿ
ಮನದ ಮೋಹದ ತೆಪ್ಪ
ರಭಸ ತಳ್ಳಿದೆಡೆಗೆ
ಆಳ ಸೆಳೆದ ಕಡೆಗೆ
ಹರಿವಿನೋಳು ಸುಳಿಯೇರಗಿ
ತಿರುಗಿಸಿತು ಮನದ ತೆಪ್ಪವನು
ಬಯಕೆಯ ದಿಕ್ಕು
ಬ್ರಮ್ಹಣೆಗಣಿಯಾಯ್ತು
ಅದೆಷ್ಟು ಪುಟ್ಟದು
ಚೈತನ್ಯದೀ ಹುಟ್ಟು
ಸಹಿಸಬಲ್ಲದೆ ಅಲೆಗಳಬ್ಬರವ
ಸೆಣೆಸ ಬಲ್ಲದೆ ಹರಿವಿನೆದುರು
ಉಗಮದಿಂ ಸಾಗರಕೆ
ಸಾಗಿರುವ ಯಾತ್ರೆಯಲಿ
ಅಂಬಿಗನು ನಾನಲ್ಲ
ಪಯಣಿಗನು ಮಾತ್ರ.
No comments:
Post a Comment