Monday, 26 September 2011

ಭಾವ ಭಾಷ್ಪದ ಹಿಂದಿನ ಭಾವ,

 


ಭಾರ್ಗವಿಯ ಅಂತರಾಳದಿ ಉಕ್ಕುವ  ಭಾವ,
ಝಾರಿಯಾಗಿ ಹರಿಯುತಿದೆಯಂತೆ.

ಸಾಗರನ ಹೃದಯದಿ ಉಕ್ಕುವ ಭಾವ,
ಅಲೆಯಾಗಿ ಅಪ್ಪಳಿಸುತಿದೆಯಂತೆ 

ಭಾಸ್ಕರನ್ ಎದೆಯಲ್ಲಿ ಉಕ್ಕುವ ಭಾವ,
ಪ್ರಭೆಯಾಗಿ ಅನುಗ್ರಹಿಸುತಿದೆಯಂತೆ.


    ಭಾವನೆಗಳು ಕೆರಳಿದಾಗ  ಕುಂಚವು ಎರಚುವ ಬಣ್ಣವೇ ಚಿತ್ರವಾಗುವುದು, ಮಾತುಗಳು ಹಡಾಗುವವು, ಗೀಚಿದ ಸಾಲುಗಳೇ ಕಾವಿತೆಗಳಗುವವು . ಭಾವನೆಗಳು ಭಂದನವನ್ನು ಇಷ್ಟಪಡುವುದಿಲ್ಲ ಯಾವುದೊ ರೂಪದಲ್ಲಿ ಹೊರಜಿಗಿದು ಚಿಮ್ಮುತ್ತವೆ. ನನ್ನ ಪುಟ್ಟ ಹೃದಯದಿಂದ ಆಗೀಗ ಚಿಮ್ಮಿದ ಭಾವವೇ ಇಲ್ಲಿ ಕಾವ್ಯರೂಪ ಪಡೆದಿವೆ. ಹೀಗೆ ಚಿಮ್ಮಿದ ಸಾಲುಗಳನ್ನೇ ಸೇರಿಸಿ, ಪೋಣಿಸಿ ಸಹೃದಯರಿಗೆ ಸಮರ್ಪಿಸುವ ಪ್ರಯತ್ನವನ್ನಷ್ಟೇ ನಾನಿಲ್ಲಿ  ಮಾಡುತ್ತಿರುವೆ.


ಸೌಂದರ್ಯ ಕಂಡಾಗ ಹೃದಯದಲಿ ಅರಳಿದ ರಸಿಕತೆಯ ಭಾವ,  ಪ್ರೆಮವನರಸಿದ ಪ್ರೇಮಿಯ ಭಾವ, ಅದು ಸಿಗದೇ ಇದ್ದಾಗ ಕೆರಳಿದ ಭಗ್ನ-ಪ್ರೇಮದ ಭಾವ,  ಅರಿಯದ ಯಾವುದನ್ನೂ ಹುಡುಕಿ ಹೋರಟ ಮನಸಿನ ಶೋಧನೆಯ ಭಾವ, ಸಮಾಜದಲ್ಲಿ  ತಪ್ಪುಗಳು ಕಂಡಾಗ ಮೂಡುವ ವಿಕಟ ಹಸದ ಭಾವ . . . ಎಲ್ಲವನ್ನು ವ್ಯಕ್ತ  ಪಡಿಸಬಲ್ಲ  ಕವಿತೆಯ ಶಕ್ತಿಯನ್ನು ನೆನೆದರೆ ಕವಿತೆ ಮುಕ್ತಿಯ ಸಾಧನ ಎಂದೆನಿಸುತ್ತದೆ.

ಕಾವ್ಯ ಸಾಗರದ ಆಳ, ವೈಶಾಲ್ಯಗಳನರಿತ ಕವಿಸಾರ್ವಭೌಮ ನಾನಲ್ಲ. ಕವಿತೆಗಳಲ್ಲಿ ನನ್ನ ಭಾವನೆಗಳನ್ನು  ಬಿಚ್ಚಿಡ ಹೊರಟವನಷ್ಟೇ. ನನ್ನೀ ಕವಿತೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಚರ್ಚಿಸಲು ಇಲ್ಲಿ ಮುಕ್ತ ಅವಕಾಶವಿದೆ. ನಿಮ್ಮ ಸಲಹೆಗಳು ನನಗೆ ಸ್ಪೂರ್ತಿ ಯಾಗುವವು.


 ಕನ್ನಡ ಸಾರಸ್ವತ ಲೋಕದಿ ಒಂದು ಬಿಂದುವಿನಂತೆ  ಕಿರಿದಾದ ನನ್ನೀ ಭಾವದ ಭಾಷ್ಪ, ಕಲಾರಸಿಕರ ಮನವನ್ನು ಒಂದಿಷ್ಟು  ತನಿಸುವುದರಲ್ಲಿ ಸಮರ್ಥವಾದರೂ ನನ್ನ ಉದ್ದೇಶ ಸಾರ್ಥಕವಾದಂತೆ. 




No comments:

Post a Comment