Wednesday, 21 September 2011

ಓ ಪ್ರೀತಿ

ನಿನ್ನರಿವು ಮಾನಸಕೆ ಹೊಳೆದಾಗಲೆಲ್ಲ 
ನಿನ್ನಿರುವು ಸ್ಮೃತಿಯಲ್ಲಿ ಸುಳಿದಾಗಲೆಲ್ಲ 
ಬಿಗಿದೆದೆಯಿಂ ತಡವರಿಸಿ ಬಾರದಿರದೀ ತುಮುಲ 
ಅಂತರಾಳದಿಂ ಉದ್ಗರಿಸಿ ಏಳದಿರದೀ  ಪ್ರಶ್ನೆ 
ತನುವ ಕೆರಲಿಸದೆ, ಕಣ್ಣಂಚ ತೋಯಿಸದೆ

ನನ್ನೆಲ ಗರ್ವವನು ಮರೆತು ಕೇಳುವೆನು 
ನನ್ನೆಲ್ಲ ಭಾವದೊಳು ಬೆರೆತು ಕೇಳುವೆನು 
ಓ ಪ್ರೀತಿ ನಿನಗದೆಷ್ಟಿದೆ ಶಕ್ತಿ !
ಚದುರಿದೆಲ್ಲ ವಿಶ್ವವನು ನಿನ್ನೆಡೆಗೆ ಸೆಳೆದಿಡಲು 
ಚಿಮ್ಮಿದೆಲ್ಲ ಭಾವಗಳ ಒಂದೆಡೆಗೆ ಬೆಸೆದಿಡಲು 


ಬಂಧನದ ಕವಚವನೋಡೆದು 
ಬಲಿತ ರೆಕ್ಕೆಗಳ ಬಡಿದು 
ಸ್ವಚ್ಚಂದ ಬಾನಿನೆಡೆ ಜಿಗಿದ ಹಕ್ಕಿ ತಾನು 
ಮರಳುವುದೇಕೆ ಮತ್ತೆ ಗೂಡಿಗೆ,     
ಓ ಪ್ರೀತಿ ನಿನ್ನೀ  ಸೆಳೆತ ಭಂದನವಲ್ಲ 
ಸ್ವಾತಂತ್ರದಾತ್ಮಕದೇ ಮುಕ್ತಿ 


ಸೆಳೆಯುತಿಹೆ ನೀನೆನ್ನ, ಕರೆಯುತಿಹೆ ನಿನ್ನತ್ತ 
ಸೆಣೆಸಲಾರೆನು ಇನ್ನು, ಸಾಗುವೇನು ನಿನ್ನತ್ತ 
ಮರೆಯಿಸಿಹೆ ಜೀವದಾಸೆಯನು 
ತೋರುತಿಹೆ ನಿನ್ನೋಳಗೊಂದು ವಿಶ್ವವನು 
ಭವಸಾಗರದಿ ಸುಳಿಯೋ ನೀನು
ಸ್ಪೂರ್ತಿ ಸೆಲೆಯೋ ನೀನು . . .

No comments:

Post a Comment