Tuesday, 20 September 2011

ನಾನ್ಯಾರೋ ಅವಳಿಗೆ

ಮಿಂಚಿನಲಿ ಕಂಡವಳು 
ಕಿರುನಗೆಯ ಚಲ್ಲಿದಳು 
ಮನವೆಲ್ಲ ತುಂಬಿಹಳು  
ಅವಳೇ ನನ್ನವಳು 

ರೆಪ್ಪೆಗಳ ಮುಚ್ಚುತಲೆ 
ಒಳ ಬರುವಳು 
ಸಹಜ ನೋಟದಲೆ 
ಹೊಸದಿಕ್ಕು ತೋರುವಳು 

ನನ್ನೆಲ್ಲ ಕನಸಿಗೆ 
ಬಣ್ಣ ಕೊಟ್ಟವಳು 
ಕಲ್ಪನೆಯರಮನೆಯ 
ರಾಣಿ ಅವಳು

ಕಂಡ ಕ್ಷಣದಿಂದ
ಕಾದಿಹೆನು ಕ್ಷಣಕಾಗಿ 
ಮನಬಿಚಿ ಇದನೆಲ್ಲ 
ಹೇಳಿ ಬಿಡಲು  

ನನ್ನವಳು ನನ್ನವಳು 
ಮನವ ಚುಂಬಿಸಿದವಳು 
ವಾಸ್ತವದಿ ಸಿಗದವಳು 
ದೂರ ನಿಂತಿಹಳು 

ಮನದ ಬಾಗಿಲನೋಮ್ಮೆ 
ತಿಳಿಯದೆ ತಟ್ಟಿದಳು 
ಯನ್ನೊಳಗೆ ನಗುತಿಹಳು 
ಹೊರಗೆನ್ನ ಕಾಡುವಳು 

ಜಂಗುಳಿಯ ಜಗವಿದು 
ಕಾಣುವನೆ ನಾನವಳಿಗೆ 
ಅವಳೇ ನನ್ನವಳು 
ನಾನ್ಯಾರೋ ಅವಳಿಗೆ.   

-  ಸುಬ್ಬು 

                               

1 comment:

  1. no words to tell about this bro.. really asome... i wish you all the best dear... life is like a video game.. i have to use the opportunities and go forward by bypassing the faults and difficuties in our path...

    ReplyDelete